GENDER-BASED DEBATES IN POPULAR DOLL SONGS
ಪ್ರಚಲಿತ ಡೊಳ್ಳಿನ ಹಾಡುಗಳಲ್ಲಿ ಲಿಂಗತಾರತಮ್ಯತೆಯ ವಾಗ್ವಾದಗಳು
DOI:
https://doi.org/10.29121/shodhkosh.v5.i4.2024.4255Abstract [English]
Doll art is a man's art. Only men should play the doll instrument. Why is that? Only men should touch this instrument. Traditional beliefs and taboos that require participation in this art form were once alive here. Today, none of the concepts and taboos mentioned above apply to doll art. This is a healthy development. Because, women have come to this field of art and have gained as much proficiency and popularity as men in the specialty of performance. This art is being performed in other contexts besides traditional performances. It is in the context of political campaigning, entertainment, and different occasions of earning money, etc. While this change has brought some healthy development here, it has also brought some unhealthy development. Today, it would not be an exaggeration to say that women outnumber men in singing doll songs. Some other women have taken the initiative to revive this art form in different settings. Some of them have succeeded. This is also a promising development. Amidst many such developments, there are things like 'acceptance' and 'denial' among men about the arrival of these women. This trend is also happening intensively in song performances. There are more denials in this. This trend has led to various arguments. Although there are many reasons for this, senior artists believe that the main reason is the nature of the performance. This is somewhat correct. But this is not the complete reason either. That is, women's performances are not being performed in the shadow of religion or within the framework of the traditional cultural identity of the Halut. They are not performing their expressions in the religious field of the Halut religion and are only performing art on popular platforms. Due to this, they are only seen as expressions of capitalist songs. Therefore, there are arguments that she has been formed or portrayed in this field and among the audience only as an artist who performs for capital and personal prestige. It is not possible to accept this argument universally. This is due to the tradition of this field of art.
Abstract [Hindi]
ಡೊಳ್ಳುಕಲೆ ಪುರುಷರ ಕಲೆ. ಪುರುಷರು ಮಾತ್ರ ಡೊಳ್ಳು ವಾದ್ಯವನ್ನು ಬಾರಿಸಬೇಕು. ಅಷ್ಟೇ ಏಕೆ? ಪುರುಷರು ಮಾತ್ರ ಈ ವಾದ್ಯವನ್ನು ಮುಟ್ಟಬೇಕು. ಈ ಕಲಾ ಪ್ರದರ್ಶನದಲ್ಲಿ ಭಾಗಿಯಾಗಬೇಕು ಎನ್ನುವ ಪಾರಂಪರಿಕ ನಂಬಿಕೆಗಳು ಮತ್ತು ನಿಷೇಧಗಳು ಒಂದು ಕಾಲದಲ್ಲಿ ಇಲ್ಲಿ ಜೀವಂತವಾಗಿದ್ದವು. ಇವತ್ತು ಮೇಲೆ ಉಲ್ಲೇಖಿತ ಯಾವುದೇ ಪರಿಕಲ್ಪನೆಗಳು ಮತ್ತು ನಿಷೇಧಗಳು ಡೊಳ್ಳುಕಲೆಗೆ ಅನ್ವಯವಾಗುವುದಿಲ್ಲ. ಇದು ಆರೋಗ್ಯಕರ ಬೆಳವಣಿಗೆ. ಏಕೆಂದರೆ, ಈ ಕಲಾಕ್ಷೇತ್ರಕ್ಕೆ ಮಹಿಳೆಯರು ಆಗಮಿಸಿ ಪ್ರದರ್ಶನದ ವೈಶಿಷ್ಟö್ಯತೆಯಲ್ಲಿ ಪುರುಷರಷ್ಟೇ ಪ್ರಾವಿಣ್ಯತೆ ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಪಾರಂಪರಿಕ ಪ್ರದರ್ಶನದ ಸಂದರ್ಭಗಳಲ್ಲಿ ಅಲ್ಲದೆ ಇತರೆ ಸಂದರ್ಭಗಳಲ್ಲೂ ಈ ಕಲೆ ಪ್ರದರ್ಶನವಾಗುತ್ತಿದೆ. ಅದು ರಾಜಕೀಯ ಪ್ರಚಾರದ ಸಂದರ್ಭ, ಮನರಂಜನೆಯ ಸಂದರ್ಭ ಹಾಗೂ ಹಣ ಗಳಿಕೆಯ ವಿಭಿನ್ನ ಸಂದರ್ಭಗಳು ಇನ್ನು ಮುಂತಾದವು. ಈ ಬದಲಾವಣೆಯು ಇಲ್ಲಿ ಒಂದಿಷ್ಟು ಆರೋಗ್ಯಕರವಾದ ಬೆಳವಣಿಗೆಯನ್ನು ತಂದರೆ, ಇನ್ನೊಂದಿಷ್ಟು ಅನಾರೋಗ್ಯಕರ ಬೆಳವಣಿಗೆಯನ್ನು ತಂದಿದೆ. ಇವತ್ತು ಡೊಳ್ಳಿನ ಹಾಡುಗಳ ಹಾಡುಗಾರಿಕೆಯಲ್ಲಿ ಪರುಷರಿಗಿಂತ ಮಹಿಳೆಯರೆ ತುಸು ಹೆಚ್ಚೆಂದರೂ ಅತಿಶಯೋಕ್ತಿ ಆಗಲಾರದು. ಇನ್ನು ಕೆಲವು ಮಹಿಳೆಯರು ವಿಭಿನ್ನ ನೆಲೆಯಲ್ಲಿ ಈ ಕಲೆಯನ್ನು ಜೀವಂತಗೊಳಿಸುವುದಕ್ಕೆ ಪಣ ತೊಟ್ಟು ಕಾರ್ಯೋನ್ಮುಖವಾಗಿದ್ದಾರೆ. ಇದರಲ್ಲಿ ಕೆಲವರು ಯಶಸ್ವಿಯಾಗಿದ್ದಾರೆ. ಇದು ಸಹ ಆಶದಾಯಕ ಬೆಳವಣಿಗೆ. ಇಂತಹ ಹಲವು ಬೆಳವಣಿಗೆಗಳ ನಡುವೆ ಈ ಮಹಿಳೆಯರ ಆಗಮನದ ಬಗ್ಗೆ ಪುರುಷರಲ್ಲಿ ‘ಸ್ವೀಕರಣೆ’ ಮತ್ತು ‘ನಿರಾಕರಣೆ’ಯ ಸಂಗತಿಗಳವೆ. ಈ ದೋರಣೆ ಹಾಡುಗಳ ಪ್ರದರ್ಶನದಲ್ಲೂ ತೀವ್ರವಾಗಿ ನಡೆಯುತ್ತಿವೆ. ಇದರಲ್ಲಿ ನಿರಾಕರಣೆಗಳೇ ಹೆಚ್ಚು. ಈ ಪ್ರವೃತ್ತಿಯು ವಿಭಿನ್ನ ವಾಗ್ವಾದಗಳಿಗೆ ಕಾರಣವಾಗಿದೆ. ಇದಕ್ಕೆ ಹಲವಾರು ಕಾರಣಗಳಿದ್ದರೂ ಪ್ರದರ್ಶನದರೀತಿ ಪ್ರಮುಖ ಕಾರಣ ಎನ್ನುವುದು ಹಿರಿಯ ಕಲಾವಿದರ ಅಭಿಪ್ರಾಯ. ಇದು ಒಂದಿಷ್ಟು ಸರಿ. ಆದರೆ ಇದೆ ಪರಿಪೂರ್ಣ ಕಾರಣವೂ ಅಲ್ಲ. ಅಂದರೆ, ಮಹಿಳೆಯರ ಪ್ರದರ್ಶನಗಳು ಧಾರ್ಮಿಕತೆ ನೆರಳಲ್ಲಿ ಅಥವಾ ಹಾಲುತದ ಪಾರಂಪರಿಕ ಸಾಂಸ್ಕೃತಿಕ ಅಸ್ಮಿತೆಯ ಪರಿದಿಯಲ್ಲಿ ಪ್ರದರ್ಶನವಾಗುತ್ತಿಲ್ಲ. ಹಾಲುಮತದ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಪ್ರದರ್ಶನ ಮಾಡದೆ ಕೇವಲ ಜನಪ್ರೀಯ ವೇದಿಕೆಗಳಲ್ಲಿ ಮಾತ್ರ ಕಲಾಪ್ರದರ್ಶನ ಮಾಡುತ್ತಿದ್ದಾರೆ. ಇದರಿಂದಾಗಿ ಇವರು ಕೇವಲ ಬಂಡವಾಳಶಾಹಿ ಡೊಳ್ಳಿನ ಹಾಡುಗಳ ಅಭಿವ್ಯಕ್ತಿಗಳಾಗಿ ಕಾಣಿಸುತ್ತಿದ್ದಾರೆ. ಹಾಗಾಗಿ ಬಂಡವಾಳಕ್ಕಾಗಿ ಮತ್ತು ವೈಯಕ್ತಿಕ ಪ್ರತಿಷ್ಠೆಗಾಗಿ ಪ್ರದರ್ಶನ ಮಾಡುವ ಕಲಾವಿದೆಯಾಗಿ ಮಾತ್ರ ಈ ಕಲಾಕ್ಷೇತ್ರದಲ್ಲಿ ಹಾಗೂ ಪ್ರೇಕ್ಷಕರಲ್ಲಿ ಈಕೆಯು ರೂಪುಗೊಂಡಿದ್ದಾಳೆ ಅಥವಾ ಚಿತ್ರಣಗೊಂಡಿದ್ದಾಳೆ ಎನ್ನುವ ವಾದಗಳಿವೆ. ಈ ವಾದವನ್ನು ಸಹ ಸಾರಸಗಟಾಗಿ ಒಪ್ಪುವುದಕ್ಕೆ ಸಾದ್ಯವಿಲ್ಲ. ಇದಕ್ಕೆ ಈ ಕಲಾಕ್ಷೇತ್ರದ ಪಾರಂಪರಿಕ
References
ಶ್ರೀ. ಕೌಜಲಗಿ ವಿಠಲ, ಡೊಳ್ಳಿನ ಹಾಡುಗಾರ, ಕೌಜಲಗಿ ಗ್ರಾ. ಗೋಕಾಕ ತಾ. ವ 47.
ಶ್ರೀ ಸೋಮಲಿಂಗ ದನಗೊಂಡ. ಡೊಳ್ಳಿನ ಹಾಡುಗಾರ, ಬಿಜ್ಜರಗಿ ಗ್ರಾ, ಬಿಜಾಪುರ ತಾ. 62.
ಹಾಡು: ಗಂಡ ಹೆಚ್ಚೆಂದು ಜಂಬದಿಂದ ಏಳಿಕೊಬ್ಯಾಡೊ: ಜಗಜ್ಜಾಲ.
ಶ್ರೀ ಮದಗೊಂಡ ಮಹಾರಾಜ. ಸಂಗೊಳಗಿ ಗ್ರಾ. ಇಂಡಿ ತಾ. ವ 45.
ಶ್ರೀ ಕೌಜಲಗಿ ವಿಠಲ, ಡೊಳ್ಳಿನ ಹಾಡುಗಾರ, ಕೌಜಲಗಿ ಗ್ರಾ. ಗೋಕಾಕ ತಾ. ವ 47.
ಯುಟ್ಯೂಬ್: ಶ್ರೀ ಬೀರಪ್ಪ ಗುಡಗುಡಿ, ಹಾಡು: ಹುಡಗಿ ನಿನ್ನ ಗ್ರಾರೇಜನೊಳಗ...
ಶ್ರೀ ನಿಂಗಪ್ಪ ಹಾ ಗುಡ್ಡದ. ಡೊಳ್ಳಿನ ಹಾಡುಗಾರ: ಡೋಣಿ ಗ್ರಾ ಗದಗ ಜಿಲ್ಲಾ ವ. 34.
ಶ್ರೀ ರಾಮಣ್ಣ ನಿಪನ್ಯಾಳ, ಡೊಳ್ಳಿನ ಹಾಡುಗಾರ. ನಿಪ್ಪಿನಾಳ ವ 45.
ಲೇ: ಪೆರಿಯರ್ ಎಂಬ ಅಚ್ಚರಿ. ಪತ್ರಿಕೆ. ನಾನು ಗೌರಿಕಾಂ: ಜಗಜ್ಜಾಲ
ಮಹಿಳೆ ಚರಿತ್ರೆ-ಪುರಾಣ: ಡಾ. ರಾಮಲಿಂಗಪ್ಪ ಚಿ. ಬೇಗೂರು. ಪು. 28.
ಶ್ರೀ ಮಹಾದೇವಪ್ಪ ಸವಸುದ್ದಿ ಹಾಗೂ ಸಂಗಡಿಗರು. ಸವಸುದ್ದಿ ಗ್ರಾ. ರಾಯಭಾಗ ತಾ.
ಮಾತು ತಲೆ ಎತ್ತುವ ಬಗೆ: ರಹಮತ್ ತರೀಕೆರೆ: ಪು.235.
ಶ್ರೀ ನಿಂಗಪ್ಪ ಹಾ ಗುಡ್ಡಪ್ಪ. ಡೊಳ್ಳಿನ ಹಾಡುಗಾರ: ಯಳವತ್ತಿ ಗ್ರಾ. ವ. 42
ಹಾಡು: ಗಂಡ ಹೆಚ್ಚೆಂದು ಜಂಬದಿಂದ ಏಳಿಕೊಬ್ಯಾಡೊ: ಜಗಜ್ಜಾಲ.
Downloads
Published
How to Cite
Issue
Section
License
Copyright (c) 2024 Chandrappa Sobati

This work is licensed under a Creative Commons Attribution 4.0 International License.
With the licence CC-BY, authors retain the copyright, allowing anyone to download, reuse, re-print, modify, distribute, and/or copy their contribution. The work must be properly attributed to its author.
It is not necessary to ask for further permission from the author or journal board.
This journal provides immediate open access to its content on the principle that making research freely available to the public supports a greater global exchange of knowledge.